Selected from : ಏಕದಾರಿ
ಎದೆ ತುಂಬಿ ಹಾಡಿದೆನು | Uncategorized

ಡಾ. ಜಿ.ಎಸ್. ಶಿವರುದ್ರಪ್ಪನವರ ಈ ಪದ್ಯ ಮತ್ತೆ ಮತ್ತೆ ನನ್ನನ್ನ ಕಾಡುತ್ತದೆ. ಒಂದು ಕಾಲಕ್ಕೆ ಇದ್ದ ಹಾಡಿನ ಮಹತ್ವ ಹಾಗೂ ಅದನ್ನು ಆಲಿಸುವ ಜನರ ನಡುವಿನ ಅಂತರವನ್ನು ಮತ್ತು ಪ್ರಸ್ತುತ ದಿನಗಳಲ್ಲಿ ತಂತ್ರಜ್ಞಾನದಿಂದ ಉಂಟಾಗುವ ಪರಿ ಅದರ ಹಿಂದೆ ಸವಾರಿ ಮಾಡವು ಮನುಷ್ಯನಿಗೆ ಕವಿಯ ಹಾಡು ಕೇಳುವಷ್ಟು ವ್ಯವದಾನವಿಲ್ಲ ಹಾಗಾಗಿ ಕವಿ ಹಾಡುತ್ತಾನೆ, ಆ ಹಾಡಿನಲ್ಲೆ ಲೀನವಾಗುತ್ತಾನೆ ಅದನ್ನು ಯಾರೂ ಕೇಳಲೆಂದು ಹಾಡುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿಬಿಡುತ್ತಾರೆ.

ಎದೆ ತುಂಬಿ ಹಾಡಿದೆನು ಅಂದು ನಾನು
   ಮನವಿಟ್ಟು ಕೇಳಿದಿರಿ ಅಲ್ಲಿ ನೀವು
      ಇಂದು ನಾ ಹಾಡಿದರು ಅಂದಿನಂತೆಯೇ ಕುಳಿತು
         ಕೇಳುವಿರಿ ಸಾಕೆನಗೆ ಅದುವೆ ಬಹುಮಾನ
            ಹಾಡುಹಕ್ಕಿಗೆ ಬೇಕೆ ಬಿರುದು ಸನ್ಮಾನ?
               ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ
                  ಹಾಡುವುದು ಅನಿವಾರ್ಯ ಕರ್ಮ ನನಗೆ
                     ಕೇಳುವವರಿಹರೆಂದು ನಾ ಬಲ್ಲೆನದರಿಂದೆ
                        ಹಾಡುವೆನು ಮೈದುಂಬಿ ಎಂದಿನಂತೆ
                           ಯಾರು ಕಿವಿಮುಚ್ಚಿದರು ನನಗಿಲ್ಲ ಚಿಂತೆ

                                                        ಜಿ.ಎಸ್. ಶಿವರುದ್ರಪ್ಪ



Tags : ಎದೆ - ತುಂಬಿ - ಹಾಡಿದೆನು
Posted by ಹಂದ್ರಾಳ ಗವಿಸಿದ್ದಪ್ಪ at Fri 21 January 2011 Time 00:03
Blog Labels